Widgets Magazine

ಪಾಕ್ ಕ್ರಿಕೆಟ್ ತಂಡದ ನೂತನ ನಾಯಕನಾದ ಬಾಬರ್ ಅಜಮ್

ಇಸ್ಲಾಮಾಬಾದ್| Krishnaveni K| Last Modified ಗುರುವಾರ, 14 ಮೇ 2020 (09:15 IST)
ಇಸ್ಲಾಮಾಬಾದ್: ಪಾಕಿಸ್ತಾನದ ವಿರಾಟ್ ಕೊಹ್ಲಿ ಎಂದೇ ಪರಿಗಣಿಸಲಾಗುವ ಆರಂಭಿಕ ಬ್ಯಾಟ್ಸ್ ಮನ್ ಬಾಬರ್ ಅಜಮ್ ಗೆ ಈಗ ನಾಯಕತ್ವದ ಪಟ್ಟ ಸಿಕ್ಕಿದೆ. ಪಾಕ್ ಏಕದಿನ ಮತ್ತು ಟಿ20 ಕ್ರಿಕೆಟ್ ತಂಡದ ನಾಯಕನಾಗಿ ಬಾಬರ್ ಗೆ ಜವಾಬ್ಧಾರಿ ವಹಿಸಲಾಗಿದೆ.

 

ಪಾಕ್ ಕ್ರಿಕೆಟ್ ತಂಡದಲ್ಲಿ ಮ್ಯಾಚ್ ವಿನ್ನರ್ ಎಂದೇ ಪರಿಗಣಿಸಲ್ಪಡುವ ಬಾಬರ್ ಅಜಮ್ ಗೆ ಸದ್ಯಕ್ಕೆ ಒಂದು ವರ್ಷದ ಅವಧಿಗೆ ನಾಯಕತ್ವದ ಜವಾಬ್ಧಾರಿ ನೀಡಲಾಗಿದೆ.
 
ಇದರ ಜತೆಗೆ ಪಾಕ್ ಕ್ರಿಕೆಟ್ ಮಂಡಳಿ ತನ್ನ ಕ್ರಿಕೆಟ್ ಆಟಗಾರರಿಗೆ ವೇತನ ನೀಡುವ ವಿಚಾರದಲ್ಲಿ ಹೊಸ ಗುತ್ತಿಗೆ ಪಟ್ಟಿ ನೀಡಿದ್ದು ಕೆಲವು ಹಿರಿಯ ಆಟಗಾರರಿಗೆ ಕೊಕ್ ನೀಡಿ ಯುವ ಆಟಗಾರರಿಗೆ ಮಣೆ ಹಾಕಿದೆ.
ಇದರಲ್ಲಿ ಇನ್ನಷ್ಟು ಓದಿ :