ಇಸ್ಲಾಮಾಬಾದ್: ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಕಳಪೆ ಪ್ರದರ್ಶನ ನೀಡಿದ್ದ ಹಿನ್ನಲೆಯಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕತ್ವಕ್ಕೆ ಬಾಬರ್ ಅಜಂ ರಾಜೀನಾಮೆ ನೀಡಿದ್ದಾರೆ.ಲೀಗ್ ಹಂತದಲ್ಲೇ ಮುಗ್ಗರಿಸಿ ಪಾಕಿಸ್ತಾನಕ್ಕೆ ಮರಳಿದ ಬೆನ್ನಲ್ಲೇ ಬಾಬರ್ ನಾಯಕತ್ವದಿಂದ ಕೆಳಗಿಳಿಯುವ ನಿರ್ಧಾರ ಮಾಡಿದ್ದಾರೆ. ಅವರ ಈ ರಾಜೀನಾಮೆ ನಿರೀಕ್ಷಿತವಾಗಿತ್ತು.‘2019 ರಲ್ಲಿ ನಾಯಕನಾಗಿ ಆಯ್ಕೆಯಾಗಿದ್ದು ಇನ್ನೂ ನನಗೆ ನೆನಪಿದೆ. ಈ ಸ್ಥಾನದಲ್ಲಿ ಹಲವು ಖುಷಿಯ ಮತ್ತೆ ಕೆಲವು ಬೇಸರದ ಕ್ಷಣಗಳನ್ನು ಕಳೆದಿದ್ದೇನೆ. ಆದರೆ ಪಾಕ್ ತಂಡದ ಘನತೆಯನ್ನು