ಲಂಡನ್: ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಗೆ ಮೊದಲು ಭಾರತ ತಂಡ ಅಭ್ಯಾಸ ನಡೆಸಲು ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಒದಗಿಸಿರುವ ಚೆಮ್ಸ್ ಫೋರ್ಡ್ ಮೈದಾನ ಅಪಾಯಕಾರಿಯಾಗಿದ್ದು, ಅಭ್ಯಾಸ ಪಂದ್ಯವನ್ನು ಮೂರೇ ದಿನಕ್ಕೆ ಸೀಮಿತಗೊಳಿಸಲಾಗಿದೆ.ಟೀಂ ಇಂಡಿಯಾ ಎಸೆಕ್ಸ್ ವಿರುದ್ಧ ಅಭ್ಯಾಸ ಪಂದ್ಯವಾಡಬೇಕಿದ್ದ ಚೆಮ್ಸ್ ಫೋರ್ಡ್ ಮೈದಾನದ ಎಲ್ಲಾ ಪಿಚ್ ನಲ್ಲಿ ವಿಪರೀತ ಹುಲ್ಲು ಬೆಳೆದಿದ್ದು, ಹೊರಗೆ ಎಲ್ಲೂ ಹುಲ್ಲಿಲ್ಲ. ಇಂತಹ ಮೈದಾನದಲ್ಲಿ ಆಡಿದರೆ ಗಾಯವಾಗುವ ಅಪಾಯವಿರುವುದರಿಂದ ಟೀಂ ಇಂಡಿಯಾ ಮೂರೇ ದಿನ ಅಭ್ಯಾಸ