ಕೊಲೊಂಬೊ: ಶ್ರೀಲಂಕಾ ಕ್ರಿಕೆಟ್ ಅಭಿಮಾನಿಗಳಿಗೆ ಬಾಂಗ್ಲಾ ಕ್ರಿಕೆಟಿಗರ ಮೇಲಿನ ರೋಷ ಮತ್ತಷ್ಟು ಹೆಚ್ಚಾಗಿದೆ. ಕೊನೆಯ ಲೀಗ್ ಪಂದ್ಯದಲ್ಲಿ ಬಾಂಗ್ಲಾ ಕ್ರಿಕೆಟಿಗರು ಮಾಡಿದ ಪುಂಡಾಟಕ್ಕೆ ಅಭಿಮಾನಿಗಳು ತಕ್ಕ ಪಾಠ ಕಲಿಸಿದ್ದಾರೆ. ಲಂಕಾ ವಿರುದ್ಧ ಕಾದಾಡಿ ಗೆದ್ದ ಬಾಂಗ್ಲಾ ಕ್ರಿಕೆಟಿಗರು ನಂತರ ನಾಗಿಣಿ ಡ್ಯಾನ್ಸ್ ಮಾಡಿ ಲೇವಡಿ ಮಾಡಿದ್ದರು. ತಮ್ಮದೇ ನಾಡಿನಲ್ಲಿ ಬಾಂಗ್ಲಾ ತಮ್ಮ ತಂಡದ ವಿರುದ್ಧ ನಡೆದುಕೊಂಡ ರೀತಿಗೆ ಲಂಕಾ ಅಭಿಮಾನಿಗಳಿಗೆ ಉರಿದು ಹೋಗಿತ್ತು.ಅದೇ ಕಾರಣಕ್ಕೆ ಫೈನಲ್ ಪಂದ್ಯಕ್ಕೆ ಅತೀ