Widgets Magazine

ಬಾಂಗ್ಲಾ ಅಂಡರ್ 19 ಕ್ರಿಕೆಟಿಗರು ಭಾರತೀಯರನ್ನು ಅಣಕಿಸಿದ್ದು ಇದಕ್ಕೇ!

ಢಾಕಾ| Krishnaveni K| Last Modified ಸೋಮವಾರ, 17 ಫೆಬ್ರವರಿ 2020 (09:11 IST)
ಢಾಕಾ: ದ.ಆಫ್ರಿಕಾದಲ್ಲಿ ನಡೆದಿದ್ದ ಅಂಡರ್ 19 ವಿಶ್ವಕಪ್ ಫೈನಲ್ ನಲ್ಲಿ ಭಾರತೀಯ ಕ್ರಿಕೆಟಿಗರು ಸೋತಾಗ ಚಾಂಪಿಯನ್ ಆದ ಬಾಂಗ್ಲಾ ಅಂಡರ್ 19 ಕ್ರಿಕೆಟಿಗರು ಅಸಭ್ಯ ವರ್ತನೆ ತೋರಿದ್ದು ಭಾರೀ ಸುದ್ದಿಯಾಗಿತ್ತು.

 
ಆದರೆ ತಾವು ಹೀಗೆ ಮಾಡಲು ಕಾರಣವೇನೆಂದು ಬಾಂಗ್ಲಾ ಕ್ರಿಕೆಟಿಗ ಶೌರಿಫುಲ್ ಇಸ್ಲಾಂ ಬಹಿರಂಗಪಡಿಸಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿದ ಶೌರಿಫ್ ಭಾರತಕ್ಕೆ ಸೋತಾಗ ಎಂತಹ ಅನುಭವವಾಗುತ್ತದೆ ಎಂದು ತೋರಿಸಿಕೊಡಬೇಕಾಗಿತ್ತು ಎಂದಿದ್ದಾರೆ.
 
‘ಹಿಂದೆ ನಾವು ಅವರ ವಿರುದ್ಧ ನಮ್ಮದೇ ನೆಲದಲ್ಲಿ ಏಷ್ಯಾಕಪ್  ಸೆಮಿಫೈನಲ್ ಮತ್ತು ಫೈನಲ್ ಸೋತಿದ್ದೆವು. ಆಗ ಅವರು ನಮ್ಮ ಎದುರು ಭಾರೀ ಸಂಭ್ರಮಪಟ್ಟು ಕುಣಿದಾಡಿದ್ದರು. ನಮಗೆ ಆಗ ತೀರಾ ಬೇಸರವಾಗಿತ್ತು. ಸೋತಾಗ ನಮ್ಮ ಎದುರು ಹಾಗೆ ಸಂಭ್ರಮಿಸಿದರೆ ಎಷ್ಟು ನೋವಾಗುತ್ತದೆ ಎಂದು ಅವರಿಗೆ ತೋರಿಸಿಕೊಡಬೇಕಾಗಿತ್ತು. ಅದಕ್ಕೇ ಆ ರೀತಿ ಸಂಭ್ರಮಪಟ್ಟೆವು’ ಎಂದು ಶೌರೀಫ್ ಹೇಳಿಕೊಂಡಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :