ಭಾರತ-ಬಾಂಗ್ಲಾದೇಶ ಕ್ರಿಕೆಟ್ ಸರಣಿಗೆ ಇದ್ದ ಅಡೆತಡೆ ದೂರ

ಮುಂಬೈ, ಗುರುವಾರ, 24 ಅಕ್ಟೋಬರ್ 2019 (10:53 IST)

ಮುಂಬೈ: ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ವಿರುದ್ಧ ಕ್ರಿಕೆಟಿಗರು ಪ್ರತಿಭಟನೆ ನಡೆಸುತ್ತಿದ್ದರಿಂದ ಭಾರತ ಮತ್ತು ಬಾಂಗ್ಲಾದೇಶ ನಡುವೆ ನವಂಬರ್ ನಲ್ಲಿ ನಡೆಯಬೇಕಿದ್ದ ಸರಣಿ ನಡೆಯುವುದು ಅನುಮಾನ ಎನ್ನುವ ಸ್ಥಿತಿ ಇತ್ತು. ಆದರೆ ಈಗ ಅದೆಲ್ಲವೂ ದೂರವಾಗಿದೆ.


 
ಬಾಂಗ್ಲಾದೇಶ ಕ್ರಿಕೆಟಿಗರಿಗೆ ವೇತನ ಹೆಚ್ಚಳ ಮಾಡುವುದಾಗಿ ಬಿಸಿಬಿ ಭರವಸೆ ನೀಡಿದ ಹಿನ್ನಲೆಯಲ್ಲಿ ಕ್ರಿಕೆಟಿಗರು ಪ್ರತಿಭಟನೆಗೆ ಅಂತ್ಯ ಹಾಡಿದ್ದಾರೆ. ಹೀಗಾಗಿ ಭಾರತಕ್ಕೆ ಪ್ರವಾಸ ಮಾಡುವುದು ಖಚಿತವಾಗಿದೆ.
 
ಆಟಗಾರರ ಹೆಚ್ಚಿನ ಬೇಡಿಕೆಗಳನ್ನು ಪುರಸ್ಕರಿಸಲಾಗಿದೆ. ಹೀಗಾಗಿ ಕ್ರಿಕೆಟಿಗರು ಪ್ರತಿಭಟನೆ ಕೈ ಬಿಟ್ಟಿದ್ದಾರೆ ಎಂದು ಬಿಸಿಬಿ ಹೇಳಿದೆ. ನವಂಬರ್ ನಲ್ಲಿ ಭಾರತ ಪ್ರವಾಸ ಮಾಡಲಿರುವ ಬಾಂಗ್ಲಾ ತಂಡ ಟಿ20 ಸರಣಿ ಆಡಲಿದೆ.ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಕುಂಬ್ಳೆ-ಕೊಹ್ಲಿ ಕಲಹಕ್ಕೆ ಮಧ್ಯಸ್ಥಿಕೆ ವಹಿಸಿದ್ದರಂತೆ ಗಂಗೂಲಿ, ಸಚಿನ್

ಮುಂಬೈ: ಟೀಂ ಇಂಡಿಯಾ ಕೋಚ್ ಆಗಿದ್ದ ಸ್ಪಿನ್ ದಿಗ್ಗಜ ಅನಿಲ್ ಕುಂಬ್ಳೆ ಮತ್ತು ನಾಯಕ ವಿರಾಟ್ ಕೊಹ್ಲಿ ನಡುವೆ ...

news

ಯುವ ಸ್ಪಿನ್ನರ್ ಶಹಬಾಜ್ ನದೀಂಗೆ ಧೋನಿ ಕೊಟ್ಟ ಆ ಕಾಂಪ್ಲಿಮೆಂಟ್ ಏನು ಗೊತ್ತಾ?

ರಾಂಚಿ: ದ.ಆಫ್ರಿಕಾ ವಿರುದ್ಧ ರಾಂಚಿಯಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಮೊದಲ ಬಾರಿಗೆ ಟೀಂ ಇಂಡಿಯಾವನ್ನು ...

news

ನಾನು ಇರೋವರೆಗೂ ಎಲ್ಲರಿಗೂ ಗೌರವ ಸಿಗುತ್ತೆ ಎಂದ ಸೌರವ್ ಗಂಗೂಲಿ

ಮುಂಬೈ: ಬಿಸಿಸಿಐ ನೂತನ ಅಧ್ಯಕ್ಷರಾಗಿ ಪದಗ್ರಹಣ ಮಾಡಿದ ಮಾಜಿ ನಾಯಕ ಸೌರವ್ ಗಂಗೂಲಿ ಮಾಧ‍್ಯಮಗಳೊಂದಿಗೆ ...

news

ರೋಹಿತ್ ಶರ್ಮಾ ಇಷ್ಟು ಬೇಗ ಈ ಸಾಧನೆ ಮಾಡಿದ್ರು!

ದುಬೈ: ಭಾರತ ಮತ್ತು ದ.ಆಫ್ರಿಕಾ ನಡುವಿನ ಟೆಸ್ಟ್ ಸರಣಿಯಲ್ಲಿ ಆರಂಭಿಕರಾಗಿ ಕಣಕ್ಕಿಳಿದು ರನ್ ಹೊಳೆಯನ್ನೇ ...