ಢಾಕಾದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನ ಆತಿಥೇಯ ಬಾಂಗ್ಲಾದೇಶ 20 ರನ್`ಗಳಿಂದ ಸೋಲಿಸುವ ಮೂಲಕ ಕಾಂಗರೂಗಳಿಗೆ ಮರ್ಮಾಘಾತವನ್ನುಂಟು ಮಾಡಿದೆ. ಎರಡೂ ಇನ್ನಿಂಗ್ಸ್`ಗಳಿಂದ 10 ವಿಕೆಟ್ ಉರುಳಿಸಿದ ಶಕೀಬ್ ಕಾಂಗರೂಗಳಿಗೆ ಸಿಂಹ ಸ್ವಪ್ನರಾದರು. ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ ತಂಡ 260 ರನ್`ಗಳನ್ನ ಕಲೆ ಹಾಕಿತು. ಇದಕ್ಕೆ ಪ್ರತಿಯಾಗಿ ಆಸ್ಟ್ರೇಲಿಯಾ ತಂಡ 217 ರನ್`ಗಳಿಗೆ ಆಲೌಟ್ ಆಗುವದರೊಂದಿಗೆ 43 ರನ್`ಗಳ ಹಿನ್ನಡೆ ಅನುಭವಿಸಿತ್ತು. 2ನೇ ಇನ್ನಿಂಗ್ಸ್`ನಲ್ಲಿ