ಬಿಸಿಸಿಐ, ಟೀಂ ಇಂಡಿಯಾ ವಿರುದ್ಧ ಬಾರ್ಮಿ ಆರ್ಮಿ ಆರೋಪ

ಲಂಡನ್| Krishnaveni K| Last Modified ಶನಿವಾರ, 11 ಸೆಪ್ಟಂಬರ್ 2021 (09:46 IST)
ಲಂಡನ್: ಭಾರತ ಮತ್ತು ಇಂಗ್ಲೆಂಡ್ ನಡುವೆ ಐದನೇ ಟೆಸ್ಟ್ ಪಂದ್ಯ ರದ್ದಾಗಿರುವುದು ಈಗ ಇಂಗ್ಲೆಂಡ್ ಸಮರ್ಥಕರ ಕೆಂಗಣ್ಣಿಗೆ ಗುರಿಯಾಗಿದೆ.
 

ಐದನೇ ಟೆಸ್ಟ್ ಪಂದ್ಯವನ್ನು ಆಡಲು ಟೀಂ ಇಂಡಿಯಾ ಆಟಗಾರರು ನಿರಾಕರಿಸಿದ್ದಕ್ಕೆ ಭಾರತೀಯ ಕ್ರಿಕೆಟಿಗರು ಮತ್ತು ಬಿಸಿಸಿಐ ವಿರುದ್ಧ ಇಂಗ್ಲೆಂಡ್ ಅಭಿಮಾನಿಗಳ ಸಂಘ ಬಾರ್ಮಿ ಆರ್ಮಿ ಗಂಭೀರ ಆರೋಪ ಮಾಡಿದೆ.
 
ಒಂದು ವೇಳೆ ಐಪಿಎಲ್ ಇರದೇ ಹೋಗಿದ್ದಲ್ಲಿ ಭಾರತೀಯ ಕ್ರಿಕೆಟಿಗರು ಈ ಪಂದ್ಯವಾಡುತ್ತಿದ್ದರು. ಐಪಿಎಲ್ ಗೆ ಇನ್ನು ಒಂದು ವಾರ ಬಾಕಿಯಿದೆ ಎನ್ನುವ ಕಾರಣಕ್ಕೆ ಕೊರೋನಾ ನೆಪವೊಡ್ಡಿ ಪಂದ್ಯದಿಂದ ಹಿಂದೆ ಸರಿದಿದ್ದಾರೆ ಎಂದು ಬಾರ್ಮಿ ಆರ್ಮಿ ಆರೋಪಿಸಿದೆ.
ಇದರಲ್ಲಿ ಇನ್ನಷ್ಟು ಓದಿ :