ಮುಂಬೈ: ಇಂಗ್ಲೆಂಡ್ ಪ್ರವಾಸದಲ್ಲಿರುವ ಟೀಂ ಇಂಡಿಯಾ ಮ್ಯಾನೇಜ್ ಮೆಂಟ್ ಗಾಯಾಳು ಶುಬ್ನಂ ಗಿಲ್ ಬದಲಿಗೆ ಪೃಥ್ವಿ ಶಾ ಮತ್ತು ದೇವದತ್ತ್ ರನ್ನು ಇಂಗ್ಲೆಂಡ್ ಗೆ ಕರೆಸಿಕೊಳ್ಳಲು ಮನವಿ ಮಾಡಿದ್ದು, ಬಿಸಿಸಿಐ ಆಯ್ಕೆ ಸಮಿತಿಯ ಆಕ್ರೋಶಕ್ಕೆ ಕಾರಣವಾಗಿದೆ.ಒಬ್ಬ ಆರಂಭಿಕ ಆಟಗಾರ ಗಾಯಗೊಂಡರೆ ಈಗಿರುವ ತಂಡದಲ್ಲೇ ಬದಲಿಯಾಗಿ ಮತ್ತೊಬ್ಬರಿದ್ದಾರೆ. ಹಾಗಿರುವಾಗ ಬೇರೆ ಆಟಗಾರರನ್ನು ಕರೆಸಿಕೊಳ್ಳುವ ಅಗತ್ಯವೇನಿದೆ? ಎಂದು ಈ ಬಗ್ಗೆ ಮನವಿ ಮಾಡಿಕೊಂಡ ಟೀಂ ಇಂಡಿಯಾ ಮ್ಯಾನೇಜ್ ಮೆಂಟ್ ಗೆ ತರಾಟೆಗೆ ತೆಗೆದುಕೊಂಡಿದ್ದಾರೆ