ದುಬೈ: ಪುಲ್ವಾಮಾ ದಾಳಿ ಹಿನ್ನಲೆಯಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ವಿಶ್ವಕಪ್ ಕ್ರಿಕೆಟ್ ಪಂದ್ಯದ ಮೇಲೆ ಅನಿಶ್ಚಿತತೆ ಮುಂದುವರಿದಿದೆ.ಪಾಕಿಸ್ತಾನದ ವಿರುದ್ಧ ಭಾರತ ವಿಶ್ವಕಪ್ ನಲ್ಲೂ ಪಂದ್ಯವಾಡಬಾರದು ಎಂದು ಹಲವು ಮಾಜಿ ಕ್ರಿಕೆಟಿಗರು, ಅಭಿಮಾನಿಗಳು, ಒತ್ತಡ ಹೇರುತ್ತಿದ್ದಾರೆ. ಒಂದು ವೇಳೆ ನಿರ್ಣಾಯಕ ಘಟ್ಟದಲ್ಲಿ ಪಾಕ್ ಎದುರಾಳಿಯಾದರೆ ಏನು ಮಾಡುವುದು ಎಂಬ ಉಭಯ ಸಂಕಟ ಭಾರತದ್ದಾಗಿದೆ.ಈ ಬೆಳವಣಿಗೆ ಹಿನ್ನಲೆಯಲ್ಲಿ ಪಾಕಿಸ್ತಾನವನ್ನೇ ಕೂಟದಿಂದ ಬಹಿಷ್ಕರಿಸುವಂತೆ ಬಿಸಿಸಿಐ, ಅಂತರಾಷ್ಟ್ರೀಯ ಕ್ರಿಕೆಟ್ ಸಮಿತಿಯನ್ನು ಒತ್ತಾಯಿಸಲಿದೆ ಎಂಬ ವರದಿ