ಮುಂಬೈ: ವಿದೇಶ ಪ್ರವಾಸದ ವೇಳೆ ಪತ್ನಿಯರನ್ನು ಸುದೀರ್ಘ ಅವಧಿಗೆ ಜತೆಗಿಟ್ಟುಕೊಳ್ಳಲು ಅವಕಾಶ ಕೊಡಬೇಕೆಂಬ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮನವಿಗೆ ಬಿಸಿಸಿಐ ಪರಿಗಣಿಸಿದೆ.ಮುಂಬೈನಲ್ಲಿ ಬಿಸಿಸಿಐ ಕಚೇರಿಯಲ್ಲಿ ನಡೆದ ಕಾರ್ಯನಿರ್ವಾಹಕ ಸಮಿತಿ ಸಭೆಯಲ್ಲಿ ಈ ಬಗ್ಗೆ ಚರ್ಚೆ ಮಾಡಲಾಗಿದೆ ಎನ್ನಲಾಗಿದೆ. ಕೊಹ್ಲಿ ಹೇಳಿದಂತೆ ಪ್ರವಾಸದುದ್ದಕ್ಕೂ ಅಲ್ಲದಿದ್ದರೂ ಕೊಂಚ ಹೆಚ್ಚು ಸಮಯ ಕುಟುಂಬದವರ ಜತೆ ಕಾಲ ಕಳೆಯಲು ಅವಕಾಶ ನೀಡುವ ಸಾಧ್ಯತೆಯಿದೆ.ಮುಂಬರುವ ಆಸ್ಟ್ರೇಲಿಯಾ ಪ್ರವಾಸದಲ್ಲಿ ಕೆಲವು ದಿನಗಳ ಕಾಲ ಫ್ಯಾಮಿಲಿ ಸಮಯ