ಮುಂಬೈ: ಕೊರೋನಾವೈರಸ್ ಲಾಕ್ ಡೌನ್ ನಿಂದಾಗಿ ಪ್ರಮುಖ ಕ್ರೀಡಾಕೂಟಗಳು ರದ್ದಾಗುವ ಹಿನ್ನಲೆಯಲ್ಲಿ ನಷ್ಟ ಪರಿಹರಿಸಲು ಟೀಂ ಇಂಡಿಯಾ ಕ್ರಿಕೆಟಿಗರ ವೇತನ ಕಡಿತ ಮಾಡಲಾಗುತ್ತದೆ ಎಂಬ ವರದಿಗಳನ್ನು ಬಿಸಿಸಿಐ ತಳ್ಳಿ ಹಾಕಿದೆ.ಬಿಸಿಸಿಐಗೆ ಟೀಂ ಇಂಡಿಯಾ ಆಟಗಾರರ ವೇತನ ಕಡಿತಗೊಳಿಸುವ ಯೋಜನೆಯಿಲ್ಲ. ಸದ್ಯಕ್ಕೆ ಅಂತಹ ಚಿಂತನೆ ನಡೆದಿಲ್ಲ ಎಂದು ಬಿಸಿಸಿಐ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.ಯಾವಾಗ ಪರಿಸ್ಥಿತಿ ಸುಧಾರಿಸುತ್ತದೆ, ಕ್ರೀಡಾಕೂಟಗಳು ಸಹಜವಾಗಿ ಆರಂಭವಾಗುತ್ತದೆ ಎಂಬ ಬಗ್ಗೆ ಇನ್ನೂ ಸ್ಪಷ್ಟನೆ ಸಿಕ್ಕಿಲ್ಲ. ಅದಾದ ಬಳಿಕವಷ್ಟೇ ನಷ್ಟ ಪರಿಹಾರಕ್ಕೆ