ಮುಂಬೈ: ಪತ್ನಿ ಹಸೀನ್ ಜಹಾನ್ ಗೆ ಗೃಹ ಹಿಂಸೆ ನೀಡಿದ್ದಾರೆಂಬ ವರದಿಗಳ ಬೆನ್ನಲ್ಲೇ ಬಿಸಿಸಿಐ ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿಗೆ ನೀಡಬೇಕಾಗಿದ್ದ ವಾರ್ಷಿಕ ಗುತ್ತಿಗೆ ರದ್ದು ಮಾಡಿತ್ತು. ಆದರೆ ಈ ರೀತಿ ಮಾಡಿ ತಪ್ಪು ಮಾಡಿತೇ?ಹಾಗಂತ ಬಿಸಿಸಿಐ ಕಾನೂನು ಸಲಹೆಗಾರ್ತಿ ಉಷಾ ನಾಥ್ ಬಂಡೋಪಾಧ್ಯಾಯ ಅಭಿಪ್ರಾಯಪಟ್ಟಿದ್ದಾರೆ. ಶಮಿ ವೈಯಕ್ತಿಕ ಬದುಕಿನಲ್ಲಿ ಆಗಿರುವ ತಪ್ಪುಗಳಿಗೂ ಬಿಸಿಸಿಐಗೂ ಯಾವುದೇ ಸಂಬಂಧವಿಲ್ಲ.ಅವೆರಡನ್ನೂ ಲಿಂಕ್ ಮಾಡಿ ಬಿಸಿಸಿಐ ವಾರ್ಷಿಕ ಗುತ್ತಿಗೆ ನೀಡದೇ ಇರುವುದು ತಪ್ಪಾಗುತ್ತದೆ.