ಬೆಂಗಳೂರು: ಚಿನ್ನಸ್ವಾಮಿ ಮೈದಾನದಲ್ಲಿ ನಿನ್ನೆ ಆಸ್ಟ್ರೇಲಿಯಾ ವಿರುದ್ಧ ನಡೆದ ನಾಲ್ಕನೇ ಏಕದಿನ ಪಂದ್ಯದ ಕುರಿತಾಗಿ ಬಿಸಿಸಿಐ ತನ್ನ ಅಧಿಕೃತ ಟ್ವಿಟರ್ ಪೇಜ್ ನಲ್ಲಿ ಎಡವಟ್ಟು ಮಾಡಿದೆ.ಟಾಸ್ ಆದ ಕೂಡಲೇ ಅದರ ಬಗ್ಗೆ ತನ್ನ ಟ್ವಿಟರ್ ಪೇಜ್ ನಲ್ಲಿ ಪ್ರಕಟಣೆ ಕೊಟ್ಟ ಬಿಸಿಸಿಐ ನಾಲ್ಕನೇ ಏಕದಿನ ಪಂದ್ಯ ಎನ್ನುವ ಬದಲು ಮೊದಲ ಟಿ 20 ಎಂದು ಬರೆದು ಎಡವಟ್ಟು ಮಾಡಿದೆ.ಮೊದಲ ಟಿ20 ಪಂದ್ಯ. ಆಸ್ಟ್ರೇಲಿಯಾ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡಿದೆ