ಐಪಿಎಲ್ 2022 ಈ ದೇಶದಲ್ಲಿ ನಡೆಸಲು ಬಿಸಿಸಿಐ ಚಿಂತನೆ?

ಮುಂಬೈ| Krishnaveni K| Last Modified ಶುಕ್ರವಾರ, 14 ಜನವರಿ 2022 (09:05 IST)
ಮುಂಬೈ: ಭಾರತದಲ್ಲಿ ಕೊರೋನಾ ತಾಂಡವವಾಡುತ್ತಿರುವ ಹಿನ್ನಲೆಯಲ್ಲಿ ಈಗ ಏಪ್ರಿಲ್ ನಲ್ಲಿ ನಡೆಯಬೇಕಿರುವ ಐಪಿಎಲ್ ಕೂಟವನ್ನು ವಿದೇಶಕ್ಕೆ ಸ್ಥಳಾಂತರಿಸುವ ಕುರಿತು ಚಿಂತನೆ ನಡೆಸುತ್ತಿದೆ.

ಮೂಲಗಳ ಪ್ರಕಾರ ರನ್ನು ದ.ಆಫ್ರಿಕಾ, ಶ್ರೀಲಂಕಾ ಅಥವಾ ಯುಎಇನಲ್ಲಿ ನಡೆಸಲು ಬಿಸಿಸಿಐ ಚಿಂತನೆ ನಡೆಸಿದೆ ಎನ್ನಲಾಗಿದೆ.


ಆದರೆ ಇದಕ್ಕೂ ಮೊದಲು ಫ್ರಾಂಚೈಸಿಗಳ ಜೊತೆ ಮಾತುಕತೆ ನಡೆಸಲಿದೆ. ಈ ವರ್ಷದ ಹರಾಜು ಪ್ರಕ್ರಿಯೆ ಫೆಬ್ರವರಿಯಲ್ಲಿ ನಡೆಯಲಿದ್ದು, ಅದಾದ ಬಳಿಕ ಫ್ರಾಂಚೈಸಿಗಳ ಜೊತೆ ಚರ್ಚಿಸಿಕೊಂಡು ಭಾರತದಲ್ಲೇ ಟೂರ್ನಿ ನಡೆಸಬೇಕೋ ಅಥವಾ ವಿದೇಶಕ್ಕೆ ಶಿಫ್ಟ್ ಮಾಡಬೇಕೋ ಎಂಬ ಬಗ್ಗೆ ತೀರ್ಮಾನಿಸಲಿದೆ.


ಇದರಲ್ಲಿ ಇನ್ನಷ್ಟು ಓದಿ :