ಮುಂಬೈ: ಏಷ್ಯಾ ಕಪ್ ಆಡಿದ ಟೀಂ ಇಂಡಿಯಾ ತಂಡದಲ್ಲಿ ಆಟಗಾರರೊಬ್ಬರನ್ನು ಬಿಸಿಸಿಐ ಆಡಳಿತಾಧಿಕಾರಿಯೊಬ್ಬರ ಕುಮ್ಮಕ್ಕಿನಿಂದ ಆಯ್ಕೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.ಈ ಬಗ್ಗೆ ಆಂಗ್ಲ ವಾಹಿನಿಯೊಂದು ವರದಿ ಪ್ರಕಟಿಸಿದೆ. ರೋಹಿತ್ ಶರ್ಮಾ ನೇತೃತ್ವದಲ್ಲಿ ಏಷ್ಯಾ ಕಪ್ ಆಡಿದ ಟೀಂ ಇಂಡಿಯಾಕ್ಕೆ ಒಬ್ಬ ಕ್ರಿಕೆಟಿಗನನ್ನು ಅರ್ಹತೆಯಿಲ್ಲದಿದ್ದೂ ಅಧಿಕಾರಿಯೊಬ್ಬರ ಕುಮ್ಮಕ್ಕಿನಿಂದ ಆಯ್ಕೆ ಮಾಡಲಾಗಿತ್ತು. ಆ ಆಟಗಾರನನ್ನು ಆಯ್ಕೆ ಮಾಡಿದ್ದರ ಔಚಿತ್ಯವೇನು ಎಂಬುದು ಗೊತ್ತಿಲ್ಲ. ಹಾಗಿದ್ದರೂ ಆಯ್ಕೆ ಮಾಡಲಾಗಿತ್ತು ಎಂದು ಹೆಸರು ಹೇಳಲಿಚ್ಛಿಸದ ವ್ಯಕ್ತಿಯೊಬ್ಬರು