ಮುಂಬೈ: ತಿಳುವಳಿಕೆಯ ಕೊರತೆಯಿಂದ ಉದ್ದೀಪನಾ ಔಷಧಿ ಸೇವಿಸುವುದನ್ನು ತಡೆಗಟ್ಟುವ ಸಲುವಾಗಿ ಆಟಗಾರರಿಗೆ ಮಾಹಿತಿ ನೀಡಲು ಬಿಸಿಸಿಐ ಸಹಾಯವಾಣಿಯೊಂದನ್ನು ತೆರೆದಿದೆ.ಇದರಿಂದ ದೇಶದ ಎಲ್ಲಾ ದೇಶೀಯ ಮಹಿಳಾ ಮತ್ತು ಪುರುಷ ಕ್ರಿಕೆಟಿಗರು ಪ್ರಯೋಜನ ಪಡೆದುಕೊಳ್ಳಬಹುದಾಗಿದೆ. ಇದನ್ನು ಚಾಲ್ತಿಗೆ ತಂದ ದೇಶದ ಮೊದಲ ಕ್ರೀಡಾ ಸಂಸ್ಥೆ ಎಂಬ ಹೆಗ್ಗಳಿಕೆಗೆ ಬಿಸಿಸಿಐ ಪಾತ್ರವಾಗಲಿದೆ.2015 ರಲ್ಲಿ ಬಿಸಿಸಿಐ 175 ಉದ್ದೀಪನಾ ಪರೀಕ್ಷೆ ನಡೆಸಿತ್ತು, ಆದರೆ ಯಾವುದೂ ಸಾಬೀತಾದ ಪ್ರಕರಣಗಳಿರಲಿಲ್ಲ. ಭಾರತದ ಕ್ರಿಕೆಟಿಗರ ಪೈಕಿ ಉದ್ದೀಪನಾ ಔಷಧಿ ತೆಗೆದುಕೊಂಡು