ಮುಂಬೈ: ಬಿಸಿಸಿಐ ಟೀಂ ಇಂಡಿಯಾ ಕ್ರಿಕೆಟಿಗರ ವಾರ್ಷಿಕ ಸಂಭಾವನೆ ಗುತ್ತಿಗೆಯ ಪಟ್ಟಿಯನ್ನು ಪರಿಷ್ಕರಣೆ ಮಾಡಲು ಹೊರಟಿದ್ದು, ಕೆಲವು ಆಟಗಾರರಿಗೆ ನಷ್ಟವಾಗುವ ಸಾಧ್ಯತೆಯಿದೆ.ಸದ್ಯಕ್ಕೆ ಅಜಿಂಕ್ಯಾ ರೆಹಾನೆ, ಚೇತೇಶ್ವರ ಪೂಜಾರ, ಇಶಾಂತ್ ಶರ್ಮಾ ಎ ದರ್ಜೆಯ ಗುತ್ತಿಗೆ ಪಡೆಯುತ್ತಿದ್ದಾರೆ. ಆದರೆ ಇವರೆಲ್ಲರ ಪ್ರದರ್ಶನ ಕಳೆದ ಕೆಲವು ಸರಣಿಗಳಿಂದ ಕಳಾಹೀನವಾಗಿದ್ದು, ತಂಡದಲ್ಲಿ ಸ್ಥಾನ ಉಳಿಸಿಕೊಳ್ಳುವುದೇ ಕಷ್ಟವಾಗಿದೆ. ಹೀಗಾಗಿ ಈ ಆಟಗಾರರಿಗೆ ಡಿಮೋಷನ್ ಸಿಗುವ ಸಾಧ್ಯತೆಯಿದ್ದು, ಬಿ ದರ್ಜೆಗೆ ಇಳಿಯಬಹುದು ಎನ್ನಲಾಗಿದೆ.ಇನ್ನು, ತಂಡದಲ್ಲಿ ಸ್ಥಿರವಾಗಿ ಸ್ಥಾನ