ಮುಂಬೈ: ಇನ್ನೇನು ವಿಶ್ವಕಪ್ ಗೆ ಕೆಲವೇ ದಿನಗಳು ಬಾಕಿಯಿರುವಾಗ ಪ್ರಮುಖ ಬೌಲರ್ ಜಸ್ಪ್ರೀತ್ ಬುಮ್ರಾ ಮತ್ತೆ ಬೆನ್ನು ನೋವಿಗೊಳಗಾಗಿದ್ದು, ವಿಶ್ವಕಪ್ ನಿಂದ ಹೊರಬಿದ್ದು ಟೀಂ ಇಂಡಿಯಾಗೆ ಶಾಕ್ ನೀಡಿದ್ದಾರೆ.ಟೀಂ ಇಂಡಿಯಾದ ಪ್ರಮುಖ ವೇಗಿಯಾದ ಯಾರ್ಕರ್ ತಜ್ಞ ಬುಮ್ರಾ ಅನುಪಸ್ಥಿತಿ ಆಸ್ಟ್ರೇಲಿಯಾ ಪಿಚ್ ನಲ್ಲಿ ಭಾರತಕ್ಕೆ ಖಂಡಿತಾ ಕಾಡಲಿದೆ. ಈಗಷ್ಟೇ ಒಮ್ಮೆ ಬೆನ್ನು ನೋವಿಗೊಳಗಾಗಿದ್ದ ಬುಮ್ರಾ ವಿಶ್ವಕಪ್ ಗೆ ಅನುಮಾನವೆನ್ನಲಾಗಿತ್ತು.ಆದರೆ ಕೇವಲ ಒಂದು ತಿಂಗಳೊಳಗಾಗಿ ಅವರನ್ನು ಆತುರದಲ್ಲಿ ಫಿಟ್ ಎಂದು ಘೋಷಿಸಿ