ಮುಂಬೈ: ಭಾರತ ಮತ್ತು ಪಾಕಿಸ್ತಾನ ಏಷ್ಯಾ ಕಪ್ ನಲ್ಲಿ ಪರಸ್ಪರ ಸೆಣಸಲಿರುವ ವಿಚಾರ ಈಗಾಗಲೇ ಕ್ರಿಕೆಟ್ ಪ್ರೇಮಿಗಳನ್ನು ಕುತೂಹಲದಲ್ಲಿರಿಸಿದೆ. ಆದರೆ ಪಂದ್ಯದ ಬಗ್ಗೆ ಬಿಸಿಸಿಐ ತಗಾದೆ ತೆಗೆದಿದೆ.ಇದಕ್ಕೆ ಕಾರಣ ಪಂದ್ಯದ ವೇಳಾಪಟ್ಟಿ. ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಪಂದ್ಯ ಸೆಪ್ಟೆಂಬರ್ 19 ಕ್ಕೆ ನಿಗದಿಯಾಗಿದೆ. ಆದರೆ ಸೆಪ್ಟೆಂಬರ್ 18 ಕ್ಕೆ ಟೀಂ ಇಂಡಿಯಾ ಅರ್ಹತಾ ಪಂದ್ಯ ಆಡಬೇಕಿದೆ.ಒಂದು ಪಂದ್ಯವಾಡಿ ಒಂದೂ ದಿನದ ಬಿಡುವಿಲ್ಲದೇ ಪಾಕಿಸ್ತಾನದ ಮಹತ್ವದ ಪಂದ್ಯಕ್ಕೆ ಟೀಂ ಇಂಡಿಯಾ