ಮುಂಬೈ: ಇತ್ತೀಚೆಗೆ ಆಟಗಾರರು ಹಲವು ವಿಚಾರಗಳ ಬಗ್ಗೆ ಬಹಿರಂಗವಾಗಿ ಆಕ್ಷೇಪ, ದೂರು ನೀಡುತ್ತಿರುವುದರಿಂದ ಬಿಸಿಸಿಐ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದೆ.ಹೀಗಾಗಿ ಆಟಗಾರರ ದೂರು, ದುಮ್ಮಾನಗಳನ್ನು ಆಲಿಸಿ ಅದಕ್ಕೆ ಪರಿಹಾರ ಕೊಡಿಸಲು ಬಿಸಿಸಿಐ ಪ್ರತ್ಯೇಕ ತಂಡ ರಚಿಸಲು ಮುಂದಾಗಿದೆ.ಇತ್ತೀಚೆಗೆ ವೃದ್ಧಿಮಾನ್ ಸಹಾ ತಮಗೆ ಪತ್ರಕರ್ತರೊಬ್ಬರು ಬೆದರಿಕೆ ಹಾಕಿದ ಸಂದೇಶವನ್ನು ಬಹಿರಂಗಪಡಿಸಿ ಅಳಲು ತೋಡಿಕೊಂಡಿದ್ದರು. ಈ ರೀತಿ ಆಟಗಾರರು ತಮ್ಮ ದೂರನ್ನು ಮಾಧ್ಯಮಗಳ ಮುಂದೆ, ಸಾಮಾಜಿಕ ಜಾಲತಾಣದಲ್ಲಿ ಹಂಚುವ ಬದಲು ನೇರವಾಗಿ ಬಿಸಿಸಿಐಗೆ