ಬೆಂಗಳೂರು: ಪ್ರತೀ ವರ್ಷ ಐಪಿಎಲ್ ಹರಾಜು ಪ್ರಕ್ರಿಯೆ ನಡೆಯುವುದು, ಎನ್ ಸಿಎ ಘಟಕವಿರುವುದು ಸೇರಿದಂತೆ ಹೆಚ್ಚಿನ ಕ್ರಿಕೆಟ್ ಚಟುವಟಿಕೆಗಳು ಬೆಂಗಳೂರಿನಲ್ಲಿ ನಡೆಯುತ್ತವೆ. ಇನ್ನು ಕ್ರಿಕೆಟ್ ದೊರೆಯ ಕೇಂದ್ರ ಕಚೇರಿಯೇ ಬೆಂಗಳೂರಿಗೆ ಶಿಫ್ಟ್ ಆಗಲಿದೆಯೇ? ಅಂತಹದ್ದೊಂದು ಯೋಜನೆ ಬಿಸಿಸಿಐಗಿದೆ. ಮೊದಲು ಕೋಲ್ಕೊತ್ತಾದಲ್ಲಿ ಬಿಸಿಸಿಐ ಕಚೇರಿಯಿತ್ತು. ಬಳಿಕ ಅದನ್ನು ಮುಂಬೈಗೆ ಸ್ಥಳಾಂತರಿಸಲಾಯಿತು. ಇದೀಗ ಬೆಂಗಳೂರಿಗೆ ಬಿಸಿಸಿಐ ಕಚೇರಿಗೆ ಶಿಫ್ಟ್ ಆಗುವ ಲಕ್ಷಣ ಕಾಣುತ್ತಿದೆ.ಮುಂಬೈನಲ್ಲಿ ಈಗ ಇರುವ ಕಚೇರಿ ಸಣ್ಣದು. ಅದರ ಬದಲಿಗೆ