ಮುಂಬೈ: ಟೀಂ ಇಂಡಿಯಾ ಹೆಡ್ ಕೋಚ್ ರಾಹುಲ್ ದ್ರಾವಿಡ್, ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ವಿರುದ್ಧ ಬಹಿರಂಗವಾಗಿ ಅಸಮಾಧಾನ ಹೊರ ಹಾಕಿ ವಿಕೆಟ್ ಕೀಪರ್ ವೃದ್ಧಿ ಮಾನ್ ಸಹಾ ಸಂಕಷ್ಟಕ್ಕೀಡಾಗಿದ್ದಾರೆ.ತಮ್ಮನ್ನು ತಂಡದಿಂದ ಅವಗಣಿಸಿರುವುದಕ್ಕೆ ದ್ರಾವಿಡ್ ಮತ್ತು ಗಂಗೂಲಿ ವಿರುದ್ಧ ಸಹಾ ಅಸಮಾಧಾನ ಹೊರಹಾಕಿದ್ದರು. ದ್ರಾವಿಡ್ ಪರೋಕ್ಷವಾಗಿ ನಿವೃತ್ತಿಗೆ ಸೂಚಿಸಿದ್ದರು. ಗಂಗೂಲಿ ನನ್ನ ಕೈ ಬಿಟ್ಟರು ಎಂದು ಸಹಾ ನೇರ ಆರೋಪ ಮಾಡಿದ್ದರು.ಇದನ್ನು ಗಂಭೀರವಾಗಿ ಪರಿಗಣಿಸಿರುವ ಬಿಸಿಸಿಐ ಸಹಾಗೆ ವಿವರಣೆ ಕೋರಿದೆ.