ಮೆಲ್ಬೋರ್ನ್: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಅಂತಿಮ ಟೆಸ್ಟ್ ಬ್ರಿಸ್ಬೇನ್ ನಲ್ಲಿ ನಡೆಯಲಿದ್ದು, ಈ ಪಂದ್ಯಕ್ಕೆ ಆಟಗಾರರ ಮತ್ತೆ ಕ್ವಾರಂಟೈನ್ ಗೊಳಗಾಗಬೇಕು ಎಂದು ಆಸ್ಟ್ರೇಲಿಯಾ ನಿಯಮ ವಿಧಿಸಿರುವುದು ಬಿಸಿಸಿಐ ಆಕ್ರೋಶಕ್ಕೆ ಕಾರಣವಾಗಿದೆ.ಈಗಾಗಲೇ ಆಸ್ಟ್ರೇಲಿಯಾಕ್ಕೆ ಬಂದಿಳಿದ ತಕ್ಷಣವೇ ಆಟಗಾರರು 14 ದಿನಗಳ ಕಡ್ಡಾಯ ಕ್ವಾರಂಟೈನ್ ಗೊಳಗಾಗಿದ್ದರು. ಅದಾದ ಬಳಿಕ ಜೈವಿಕ ಸುರಕ್ಷಾ ವಲಯದಲ್ಲಿದ್ದಾರೆ. ಇದರ ಮಧ್ಯೆ ಮೂರನೇ ಟೆಸ್ಟ್ ಪಂದ್ಯ ಕೊರೋನಾ ಪ್ರಕರಣಗಳಿರುವ ಸಿಡ್ನಿಯಲ್ಲಿ ನಡೆಯುತ್ತಿದೆ. ಹೀಗಾಗಿ ಆಟಗಾರರು ಮತ್ತೆ ಕ್ವಾರಂಟೈನ್