ಬೆಂಗಳೂರು: ಭಾರತ ಮತ್ತು ಶ್ರೀಲಂಕಾ ನಡುವಿನ ಎರಡನೇ ಟೆಸ್ಟ್ ಪಂದ್ಯವೂ ಮೂರೇ ದಿನಕ್ಕೆ ಮುಕ್ತಾಯಗೊಳ್ಳುವ ಎಲ್ಲಾ ಸೂಚನೆಯಿದೆ.ಮೊದಲ ದಿನದಾಟದಲ್ಲಿ ಎರಡೂ ತಂಡಗಳ ವಿಕೆಟ್ ಗಳು ತರಗೆಲೆಯಂತೆ ಉರುಳಿವೆ. ಇಂತಹ ಪಿಚ್ ನಲ್ಲಿ ಟೆಸ್ಟ್ ಪಂದ್ಯ ಐದೂ ದಿನ ನಡೆದರೆ ಅದು ದೊಡ್ಡ ಪವಾಡ.ನಿನ್ನೆಯ ದಿನದಂತ್ಯಕ್ಕೆ ಲಂಕಾ ಮೊದಲ ಇನಿಂಗ್ಸ್ ನಲ್ಲಿ 6 ವಿಕೆಟ್ ಕಳೆದುಕೊಂಡು 86 ರನ್ ಗಳಿಸಿತ್ತು. ಭಾರತದ ಮೊದಲ ಇನಿಂಗ್ಸ್ 252 ರನ್ ಗಳಿಗೆ ಸಮಾಪ್ತಿಯಾಗಿತ್ತು. ಅಂದರೆ