ಮಳೆ ನಿಂತ ಮೇಲೆ ಆಸ್ಟ್ರೇಲಿಯಾ ಮೇಲೆ ಭುವನೇಶ್ವರ್ ಆಟ!

ಮೆಲ್ಬೋರ್ನ್| Krishnaveni K| Last Modified ಶುಕ್ರವಾರ, 18 ಜನವರಿ 2019 (09:39 IST)
ಮೆಲ್ಬೋರ್ನ್: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ತೃತೀಯ ಏಕದಿನ ಪಂದ್ಯದಲ್ಲಿ ಮಳೆಯಿಂದಾಗಿ ಆಟ ಕೊಂಚ ತಡವಾಗಿ ಆರಂಭವಾದರೂ ಇದೀಗ ಟೀಂ ಇಂಡಿಯಾ ಎದುರಾಳಿಗೆ ಆರಂಭಿಕ ಆಘಾತ ನೀಡುವಲ್ಲಿ ಯಶಸ್ವಿಯಾಗಿದೆ.
  ಎರಡು ಎಸೆತವಾದ ಬಳಿಕ ಮಳೆ ಬಂದಿದ್ದರಿಂದ ಆಟ ಕೆಲ ಕಾಲ ಸ್ಥಗಿತಗೊಂಡಿತು. ನಂತರ ಮಳೆ ನಿಂತು ಆಟ ಶುರುವಾದ ಮೇಲೆ ವೇಗಿ ಭುವನೇಶ್ವರ್ ಕುಮಾರ್ ಆರಂಭದಲ್ಲೇ ಆಸೀಸ್ ಆರಂಭಿಕರ ವಿಕೆಟ್ ಕಿತ್ತು ಆಘಾತ ನೀಡಿದರು.>  > ಆದರೆ ಇದಾದ ಬಳಿಕ ತಂಡಕ್ಕೆ ಚೇತರಿಕೆ ನೀಡಿರುವ ಶಾನ್ ಮಾರ್ಷ್ (16) ಮತ್ತು ಉಸ್ಮಾನ್ ಖವಾಜ (17)  ಇದುವರೆಗೆ 28 ರನ್ ಗಳ ಜತೆಯಾಟವಾಡಿದ್ದಾರೆ. ಇತ್ತೀಚೆಗಿನ ವರದಿ ಬಂದಾಗ ಆಸೀಸ್ 17 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 55 ರನ್ ಗಳಿಸಿದೆ.  
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಇದರಲ್ಲಿ ಇನ್ನಷ್ಟು ಓದಿ :