ನವದೆಹಲಿ: ದೇಶದಲ್ಲಿ ಸರ್ಕಾರದ ಯಾವುದೇ ಸವಲತ್ತುಗಳಲ್ಲಿ ಪರಿಶಿಷ್ಟ ಜಾತಿ ವರ್ಗದವರಿಗೆ ಮೀಸಲಾತಿ ಇದೆ. ಅದೇ ಮೀಸಲಾತಿ ಕ್ರಿಕೆಟ್ ನಲ್ಲೂ ಬರಬೇಕೆಂಬ ವಿಚಿತ್ರ ಬೇಡಿಕೆಯನ್ನು ಬಿಜೆಪಿ ಸಂಸದರೊಬ್ಬರು ಮುಂದಿಟ್ಟಿದ್ದಾರೆ.ದೆಹಲಿ ವಾಯವ್ಯ ಪ್ರದೇಶದ ಸಂಸದ ಉದಿತ್ ರಾಜ್ ಇಂತಹ ವಿಚಿತ್ರ ಬೇಡಿಕೆಯಿಟ್ಟವರು. ಕೇವಲ ಪತ್ರಿಕೆಯಲ್ಲಿ ಹೇಳಿಕೆ ನೀಡಿರುವುದು ಮಾತ್ರವಲ್ಲ, ತನ್ನ ಬೇಡಿಕೆಯನ್ನು ಶೀಘ್ರದಲ್ಲೇ ಭಾರತದಲ್ಲಿ ಕ್ರಿಕೆಟ್ ಆಡಳಿತದ ಚುಕ್ಕಾಣಿ ಹಿಡಿದಿರುವ ಬಿಸಿಸಿಐ ಮತ್ತು ಪ್ರಧಾನಿ ನರೇಂದ್ರ ಮೋದಿಗೂ ತಲುಪಿಸುವುದಾಗಿ ಹೇಳಿಕೊಂಡಿದ್ದಾರೆ.ಇದೇ ಸಂಸದರು ಹಿಂದೊಮ್ಮೆ