ಬೆಂಗಳೂರು: ಕ್ರಿಕೆಟ್ ದೇವರು ಎಂದೇ ಕರೆಯಲ್ಪಡುವ ಮಾಸ್ಟರ್ ಬ್ಲಾಸ್ಟರ್ ಗೆ ಇಂದು 45 ನೇ ಜನ್ಮ ದಿನದ ಸಂಭ್ರಮ. ಹೀಗಾಗಿ ತೆಂಡುಲ್ಕರ್ ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ವಿಶ್ ಮಾಡಿದ್ದಾರೆ.ಕ್ರಿಕೆಟ್ ಲೋಕದ ದಿಗ್ಗಜರ ಜತೆ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಕೂಡಾ ಮಾಸ್ಟರ್ ಬ್ಲಾಸ್ಟರ್ ಗೆ ಟ್ವಿಟರ್ ಮೂಲಕ ಶುಭಾಷಯ ಕೋರಿದ್ದಾರೆ.ಪ್ರತೀ ಬಾರಿ ಸಚಿನ್ ತೆಂಡುಲ್ಕರ್ ಕ್ರೀಸ್ ಗೆ ಬಂದಾಗ ಇಡೀ ದೇಶವೇ ಸಚಿನ್.. ಸಚಿನ್ ಎಂದು ಘೋಷ ಮೊಳಗಿಸುತ್ತದೆ.