ಮುಂಬೈ: ಟೀಂ ಇಂಡಿಯಾ ನಾಯಕನ ಹುದ್ದೆ ಆರಂಭದಲ್ಲಿ ರಾಜ ಸಿಂಹಾಸನದಂತೆ ಕಂಡರೂ ಕೊನೆಗೆ ಸಿಗುವುದು ಅವಮಾನವೇ. ಇದು ಗಂಗೂಲಿಯಿಂದ ಹಿಡಿದು ಇದೀಗ ಕೊಹ್ಲಿಯವರೆಗೆ ಸಾಬೀತಾಗಿದೆ.ಭಾರತಕ್ಕೆ ಗೆಲುವಿನ ಮುಖ ತೋರಿಸಿದ್ದ ಯಶಸ್ವೀ ನಾಯಕ ಸೌರವ್ ಗಂಗೂಲಿಯನ್ನೂ ಬಿಸಿಸಿಐ ಕೊನೆಗೆ ಅವಮಾನಕಾರಿಯಾಗಿ ನಡೆಸಿಕೊಂಡಿತ್ತು. ಗ್ರೆಗ್ ಚಾಪೆಲ್ ಜೊತೆಗಿನ ವಿವಾದದ ಬಳಿಕ ಗಂಗೂಲಿಯಿಂದ ಅಂದು ನಾಯಕತ್ವ ಕಿತ್ತುಕೊಂಡು ಮುಖಭಂಗವಾಗಿತ್ತು.ಬಳಿಕ ಧೋನಿಗೂ ನಾಯಕರಾಗಿ ಕೊನೆಯ ದಿನಗಳಲ್ಲಿ ಗೌರವ ಸಿಗಲೇ ಇಲ್ಲ. ಎರಡೆರಡು ವಿಶ್ವಕಪ್ ಗೆಲ್ಲಿಸಿಕೊಟ್ಟ ನಾಯಕನಿಗೂ