ಮುಂಬೈ: ಟೀಂ ಇಂಡಿಯಾದ ಯಶಸ್ವೀ ನಾಯಕನಾಗಿದ್ದ ಸೌರವ್ ಗಂಗೂಲಿಗೆ ಈಗ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಚುಕ್ಕಾಣಿ ಹಿಡಿಯುವ ಅವಕಾಶ ಬಂದಿದೆ. ಆದರೆ ಅಧ್ಯಕ್ಷರಾಗಲಿರುವ ಗಂಗೂಲಿ ಹಾದಿ ಸುಗಮವಾಗಿಲ್ಲ.ಹಿಂದೆ ಅವರು ಟೀಂ ಇಂಡಿಯಾಗೆ ನಾಯಕರಾದಾಗಲೂ ತಂಡದ ಸ್ಥಿತಿ ಹೀಗೆಯೇ ಇತ್ತು. ಮ್ಯಾಚ್ ಫಿಕ್ಸಿಂಗ್ ಕಪಿಮುಷ್ಠಿಯಲ್ಲಿ ನಲುಗಿದ್ದ ತಂಡವನ್ನು ಯಶಸ್ಸಿಗೆ ಹಳಿಗೆ ತಂದು ನಿಲ್ಲಿಸಿದ ಕೀರ್ತಿ ಗಂಗೂಲಿಯದ್ದು. ಹಠವಾದಿ, ಛಲವಾದಿ, ಆಕ್ರಮಣಕಾರಿ ಮನೋಭಾವ, ಹುಂಬುತನ ಇದು ಗಂಗೂಲಿಯ ಸ್ವಭಾವ. ಅವರ ಈ