ದುಬೈ: ಈ ಬಾರಿಯ ಐಸಿಸಿ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ನ ಬಹುಮಾನ ಮೊತ್ತವನ್ನು ಐಸಿಸಿ ಹೆಚ್ಚಿಸಿದೆ. 500,000 ಅಮೆರಿಕನ್ ಡಾಲರ್ ನಷ್ಟು ಹೆಚ್ಚಳ ಮಾಡಲಾಗಿದೆ. ಇದರಿಂದಾಗಿ ಬಹುಮಾನ ಮೊತ್ತ ಒಟ್ಟಾರೆಯಾಗಿ 4.5 ಮಿಲಿಯನ್ ಡಾಲರ್ ನಷ್ಟಾಗಿದೆ. ಇದರಲ್ಲಿ ವಿಜೇತ ತಂಡ 2.2 ಮಿಲಿಯನ್ ಡಾಲರ್ ಪಡೆಯಲಿದೆ. ರನ್ನರ್ ಅಪ್ ತಂಡಕ್ಕೆ 1.1 ಮಿಲಿಯನ್ ಡಾಲರ್ ಲಭಿಸಲಿದೆ.ಸೆಮಿಫೈನಲ್ ತಲುಪಿದ ತಂಡಗಳಿಗೆ 450, 000 ಅಮೆರಿಕನ್ ಡಾಲರ್, ಗ್ರೂಪ್ ನಲ್ಲಿ ಅಗ್ರ