ಚೆನ್ನೈ: ಮುಂದಿನ ಐಪಿಎಲ್ ಆವೃತ್ತಿಗೆ ಮರಳಲು ಹಾತೊರೆಯುತ್ತಿರುವ ಐಪಿಎಲ್ ಕ್ರಿಕೆಟ್ ನ ಚೆನ್ನೈ ಸೂಪರ್ ಕಿಂಗ್ಸ್ ತಂಡ ಈಗಿಂದಲೇ ತಾಲೀಮು ಶುರುಮಾಡಿದೆ. ಮ್ಯಾಚ್ ಫಿಕ್ಸಿಂಗ್ ಕಳಂಕದಿಂದಾಗಿ ಚೆನ್ನೈ ತಂಡ ಹಾಗೂ ಮಾಲಿಕ ಎನ್. ಶ್ರೀನಿವಾಸನ್ ಅಳಿಯ ಗುರುನಾಥ್ ಮೇಯಪ್ಪನ್ ಗೆ ಮೂರು ವರ್ಷ ಐಪಿಎಲ್ ನಿಂದ ನಿಷೇಧ ಹೇರಲಾಗಿತ್ತು. ಇದೀಗ ಮತ್ತೆ ಗುರುನಾಥ್ ಪ್ರತ್ಯಕ್ಷರಾಗಿದ್ದಾರೆ.ಈ ವರ್ಷದ ಆವೃತ್ತಿಗೆ ಫುಲ್ ತಯಾರಿ ನಡೆಸುತ್ತಿರುವ ಗುರುನಾಥ್ ಟ್ವಿಟರ್ ಖಾತೆಯಲ್ಲಿ ಮತ್ತೆ ಸಕ್ರಿಯರಾಗಿದ್ದಾರೆ.