ಮುಂಬೈ: ಟೀಂ ಇಂಡಿಯಾ ಮುಖ್ಯ ಆಯ್ಕೆಗಾರ ಚೇತನ್ ಶರ್ಮಾ ವಿರಾಟ್ ಕೊಹ್ಲಿ ಮತ್ತು ಮಾಜಿ ನಾಯಕ ಸೌರವ್ ಗಂಗೂಲಿ ವಿರುದ್ಧ ಕುಟುಕು ಕಾರ್ಯಾಚರಣೆಯೊಂದರಲ್ಲಿ ನೀಡಿದ ಹೇಳಿಕೆ ಈಗ ಸಂಚಲನ ಸೃಷ್ಟಿ ಮಾಡಿದೆ.ಕುಟುಕು ಕಾರ್ಯಾಚಾರಣೆಯೊಂದರಲ್ಲಿ ಚೇತನ್ ನೀಡಿರುವ ಹೇಳಿಕೆಗಳು ಈಗ ಬಿಸಿಸಿಐ ಕೆಂಗಣ್ಣಿಗೆ ಗುರಿಯಾಗಿದೆ. ಟೀಂ ಇಂಡಿಯಾ ಕ್ರಿಕೆಟಿಗರು ಶೇ.100 ರಷ್ಟು ಫಿಟ್ ಇಲ್ಲದೇ ಇದ್ದರೂ ಉದ್ದೀಪನಾ ಪರೀಕ್ಷೆಯಲ್ಲಿ ಪತ್ತೆಯಾಗದಂತಹ ಇಂಜೆಕ್ಷನ್ ಬಳಸಿ ಫಿಟ್ ಎಂದು ಘೋಷಿಸಿಕೊಳ್ಳುತ್ತಾರೆ. ಕೊಹ್ಲಿ ಮತ್ತು ಗಂಗೂಲಿ