ಲೀಡ್ಸ್: ಇತ್ತೀಚೆಗೆ ಟೀಂ ಇಂಡಿಯಾದಲ್ಲಿ ಪೈಪೋಟಿ ಹೇಗೆಂದರೆ ಒಂದೇ ಒಂದು ವೈಫಲ್ಯ ಸಾಕು, ಮುಂದಿನ ಪಂದ್ಯದಿಂದ ಕೊಕ್ ಸಿಗುತ್ತದೆ. ಆದರೆ ಚೇತೇಶ್ವರ ಪೂಜಾರ ವಿಚಾರದಲ್ಲಿ ಮಾತ್ರ ಇದು ತದ್ವಿರುದ್ಧವಾಗಿದೆ.ಪೂಜಾರ ಬ್ಯಾಟ್ ನಿಂದ ರನ್ ಹರಿದುಬಂದಿದ್ದು, ಅಭಿಮಾನಿಗಳಿಗೆ ನೆನಪೇ ಇಲ್ಲ. ಟೆಸ್ಟ್ ಸ್ಪೆಷಲಿಸ್ಟ್ ಎನ್ನುವ ಕಾರಣಕ್ಕೆ ಪೂಜಾರಗೆ ಟೆಸ್ಟ್ ತಂಡದಲ್ಲಿ ಖಾಯಂ ಅವಕಾಶವಿದೆ. ಆದರೆ ತಂಡದಲ್ಲಿ ಅವಕಾಶ ಪಡೆಯಲು ಪ್ರತಿಭಾವಂತರ ಸಾಲು ಇರುವಾಗ ಪದೇ ಪದೇ ವಿಫಲವಾಗುತ್ತಿರುವ ಆಟಗಾರನಿಗೇ ಮತ್ತೆ ಅವಕಾಶ