ಸಿಡ್ನಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯದ ದ್ವಿತೀಯ ದಿನವಾದ ಇಂದು ನಿನ್ನೆ ಶತಕ ಸಿಡಿಸಿ ಅಜೇಯರಾಗುಳಿದಿದ್ದ ಚೇತೇಶ್ವರ ಪೂಜಾರ 193 ರನ್ ಗಳಿಗೆ ಔಟಾಗುವ ಮೂಲಕ ಸ್ವಲ್ಪದರಲ್ಲೇ ದ್ವಿತಶಕ ತಪ್ಪಿಸಿಕೊಂಡರು.ಆದರೆ ಪೂಜಾರ ಮ್ಯಾರಥಾನ್ ಇನಿಂಗ್ಸ್ ಗೆ ಎದುರಾಳಿ ಆಟಗಾರರೂ ಚಪ್ಪಾಳೆ ತಟ್ಟಿ ಗೌರವಿಸಿದರು. ಇಷ್ಟು ದಿನ ಮೈದಾನದಲ್ಲಿದ್ದ ಆಸೀಸ್ ಅಭಿಮಾನಿಗಳು ಭಾರತೀಯ ಕ್ರಿಕೆಟಿಗರನ್ನು, ಪ್ರೇಕ್ಷಕರನ್ನು ಮೂದಲಿಸುತ್ತಿದ್ದರು. ಆದರೆ ಸಿಡ್ನಿಯಲ್ಲಿ ಪೂಜಾರ ಔಟಾಗಿ ಪೆವಿಲಿಯನ್ ಗೆ ಮರಳುವಾಗಿ