ಅಭ್ಯಾಸ ಪಂದ್ಯದಲ್ಲೂ ಚೇತೇಶ್ವರ ಪೂಜಾರ ಡುಮ್ಕಿ

ಲಂಡನ್| Krishnaveni K| Last Modified ಬುಧವಾರ, 21 ಜುಲೈ 2021 (10:01 IST)
ಲಂಡನ್: ಇಂಗ್ಲೆಂಡ್ ಕೌಂಟಿ ತಂಡದ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಕಳಪೆ ಮೊತ್ತಕ್ಕೆ ಔಟಾದ ಟೀಂ ಇಂಡಿಯಾ ಬ್ಯಾಟ್ಸ್ ಮನ್ ಚೇತೇಶ‍್ವರ ಪೂಜಾರ ಟ್ರೋಲ್ ಆಗಿದ್ದಾರೆ.

 

ಇತ್ತೀಚೆಗೆ ಕಳಪೆ ಫಾರ್ಮ್ ನಲ್ಲಿರುವ ಪೂಜಾರರನ್ನು ಆಡುವ ಬಳಗದಿಂದ ಕೈಬಿಡಬೇಕೆಂಬ ಒತ್ತಾಯ ಕೇಳಿಬರುತ್ತಿದೆ. ಇದರ ನಡುವೆಯೇ ಪೂಜಾರ ಮತ್ತೆ ತಪ್ಪು ಸುಧಾರಿಸದೇ ಕಳಪೆ ಮೊತ್ತಕ್ಕೆ ಸ್ಟಂಪ್ ಔಟ್ ಆಗಿದ್ದು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ.
 
ಅಭ್ಯಾಸ ಪಂದ್ಯದಲ್ಲಿ ಕೌಂಟಿ ಬೌಲರ್ ಗಳನ್ನೇ ಎದುರಿಸಲಾಗದ ಟೀಂ ಇಂಡಿಯಾ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಯಲ್ಲಿ ಹೇಗೆ ಆಡಬಹುದು ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ. ಈಗಲಾದರೂ ಪೂಜಾರ ಸ್ಥಾನಕ್ಕೆ ಹನುಮ ವಿಹಾರಿ ಅಥವಾ ಕೆಎಲ್ ರಾಹುಲ್ ಗೆ ಅವಕಾಶ ನೀಡಿ ಎಂದು ಒತ್ತಾಯಿಸಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :