ಮೊಹಾಲಿ: ಕೆಎಲ್ ರಾಹುಲ್ ಮೊನ್ನೆಯಷ್ಟೇ ತಮ್ಮ ಐಪಿಎಲ್ ತಂಡದ ಸಹವರ್ತಿ, ವಿಂಡೀಸ್ ದಾಂಡಿಗ ಕ್ರಿಸ್ ಗೇಲ್ ಬಗ್ಗೆ ಭವಿಷ್ಯವಾಣಿ ಹೇಳಿದ್ದರು. ಅದನ್ನು ಇದೀಗ ಗೇಲ್ ಸಮರ್ಥಿಸಿಕೊಂಡಿದ್ದಾರೆ.ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 63 ರನ್ ಗಳಿಸಿ ಫಾರ್ಮ್ ಗೆ ಮರಳಿದ್ದ ಕ್ರಿಸ್ ಗೇಲ್ ಆಟ ನೋಡಿ ರಾಹುಲ್, ಗೇಲ್ ಫಾರ್ಮ್ ಗೆ ಮರಳಿರುವುದು ಬೇರೆ ತಂಡಗಳಿಗೆ ಕೆಟ್ಟ ಸುದ್ದಿ ಎಂದು ಸಹವರ್ತಿಯ ಹೊಗಳಿದ್ದರು.ಅದನ್ನು ನಿನ್ನೆ ನಡೆದ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಗೇಲ್