ಕೇಪ್ ಟೌನ್: ಭಾರತ ಮತ್ತು ದ.ಆಫ್ರಿಕಾ ನಡುವಿನ ಟೆಸ್ಟ್ ಸರಣಿ ಗೆದ್ದು ಇತಿಹಾಸ ನಿರ್ಮಿಸುವ ಉತ್ಸಾಹದಲ್ಲಿರುವ ಟೀಂ ಇಂಡಿಯಾಗೆ ಬ್ಯಾಟಿಂಗೇ ಚಿಂತೆಯಾಗಿದೆ.ಇತ್ತೀಚೆಗಿನ ದಿನಗಳಲ್ಲಿ ಭಾರತ ಹೈ ಸ್ಕೋರಿಂಗ್ ಪಂದ್ಯವಾಡಿಯೇ ಇಲ್ಲ. ಬ್ಯಾಟರ್ ಗಳು ಶತಕ ಗಳಿಸುವುದು ಅಪರೂಪವಾಗಿದೆ. ಒಬ್ಬ ಬ್ಯಾಟಿಗ ಸತತವಾಗಿ ರನ್ ಗಳಿಸಿರುವ ಉದಾಹರಣೆಯೇ ಇಲ್ಲ. ಹೀಗಾಗಿ ಕೋಚ್ ದ್ರಾವಿಡ್ ಗೆ ಬ್ಯಾಟರ್ ಗಳೇ ಚಿಂತೆಗೆ ಕಾರಣವಾಗಿದ್ದಾರೆ.ನಾಯಕ ವಿರಾಟ್ ಕೊಹ್ಲಿಯಿಂದ ಹಿಡಿದು, ಚೇತೇಶ್ವರ ಪೂಜಾರ, ಅಜಿಂಕ್ಯಾ ರೆಹಾನೆ, ರಿಷಬ್