ಹೈದರಾಬಾದ್: ಭಾರತದ ಖ್ಯಾತ ಬ್ಯಾಡ್ಮಿಂಟನ್ ತಾರೆಯರಾದ ಸೈನಾ ನೆಹ್ವಾಲ್ ಮತ್ತು ಪಿವಿ ಸಿಂಧುಗೆ ಕೋಚ್ ಗೋಪಿಚಂದ್ ಇದೀಗ ಬೇರೆ ಅಕಾಡೆಮಿಯಲ್ಲಿ ತರಬೇತಿ ನೀಡುತ್ತಿದ್ದಾರಂತೆ! ಸೈನಾ ನೆಹ್ವಾಲ್ ತಮ್ಮ ಆರಂಭದ ದಿನಗಳಲ್ಲಿಯೇ ಗೋಪಿಚಂದ್ ಜತೆ ತರಬೇತಿ ಪಡೆಯುತ್ತಿದ್ದರು. ಆದರೆ ಇದರ ನಡುವೆ ಒಮ್ಮೆ ತಮಗೆ ಪ್ರಾಶಸ್ತ್ಯ ನೀಡುತ್ತಿಲ್ಲವೆಂಬ ಕಾರಣಕ್ಕೆ ಸೈನಾ ಮುನಿಸಿಕೊಂಡು ವಿಮಲ್ ಕುಮಾರ್ ಬಳಿ ತರಬೇತಿ ಪಡೆಯಲು ಬಂದಿದ್ದರು. ಆದರೆ ಈ ಸಂದರ್ಭದಲ್ಲಿ ಅವರ ಪ್ರದರ್ಶನ ಚೆನ್ನಾಗಿರಲಿಲ್ಲ. ಹೀಗಾಗಿ