ಜೈಪುರ: ಟೀಂ ಇಂಡಿಯಾ ಮುಖ್ಯ ಕೋಚ್ ಆಗಿ ಆಯ್ಕೆಯಾಗಿರುವ ರಾಹುಲ್ ದ್ರಾವಿಡ್ ಇಂದಿನಿಂದ ಕರ್ತವ್ಯ ಶುರು ಮಾಡಿದ್ದಾರೆ. ಕೋಚ್ ಆಗಿ ಅಧಿಕಾರ ಸ್ವೀಕರಿಸಿದ ದ್ರಾವಿಡ್ ಗೆ ನಾಳೆಯಿಂದ ನಡೆಯಲಿರುವ ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿ ಮೊದಲ ಸರಣಿಯಾಗಿದೆ. ಇದಕ್ಕಾಗಿ ಇಂದು ನಾಯಕ ರೋಹಿತ್ ಶರ್ಮಾ ಹಾಗೂ ಟೀಂ ಇಂಡಿಯಾ ಜೊತೆಗೆ ಮೈದಾನಕ್ಕಿಳಿದ ದ್ರಾವಿಡ್ ಆಟಗಾರರಿಗೆ ಮಾರ್ಗದರ್ಶನ ನೀಡಿದ್ದಾರೆ.ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿರುವ ದ್ರಾವಿಡ್, ರೋಹಿತ್ ಒಬ್ಬ ಪ್ರತಿಭಾವಂತ ಎಂಬುದು