ಪುಣೆ: ಈ ಬಾರಿ ಏಕದಿನ ವಿಶ್ವಕಪ್ ಗೆಲ್ಲುವ ಕನಸು ಹೊತ್ತಿರುವ ಟೀಂ ಇಂಡಿಯಾ ಇದೀಗ ಬಾಂಗ್ಲಾದೇಶದ ವಿರುದ್ಧದ ಪಂದ್ಯಕ್ಕಾಗಿ ಪುಣೆಯಲ್ಲಿ ಬೀಡುಬಿಟ್ಟಿದೆ.ರೋಹಿತ್ ಪಡೆ ಮೊನ್ನೆಯೇ ಪುಣೆಗೆ ಬಂದಿಳಿದಿದೆ. ಆದರೆ ನಿನ್ನೆ ಮತ್ತು ಇಂದು ಮಧ್ಯಾಹ್ನದವರೆಗೆ ಟೀಂ ಇಂಡಿಯಾ ಕ್ರಿಕೆಟಿಗರು ಹೋಟೆಲ್ ನಲ್ಲಿಯೇ ಇದ್ದು ವಿಶ್ರಾಂತಿ ಪಡೆದರು.ಆದರೆ ಕೋಚ್ ರಾಹುಲ್ ದ್ರಾವಿಡ್ ಮಾತ್ರ ಪುಣೆಗೆ ಬಂದಿಳಿದ ತಕ್ಷಣ ರಿಲ್ಯಾಕ್ಸ್ ಆಗದೇ ಡ್ಯೂಟಿ ಮೂಡ್ ನಲ್ಲಿದ್ದರು. ವಿಮಾನ ನಿಲ್ದಾಣದಿಂದ ನೇರವಾಗಿ ಪುಣೆ ಮೈದಾನಕ್ಕೆ