ಲಕ್ನೋ: ಭಾರತ ಮತ್ತು ಶ್ರೀಲಂಕಾ ನಡುವಿನ ಮೊದಲ ಟಿ20 ಪಂದ್ಯದಲ್ಲಿ ನಿನ್ನೆ ತಮಾಷೆಯ ಘಟನೆಯೊಂದು ನಡೆದಿದೆ. ಈ ಕ್ಷಣಗಳು ಕ್ಯಾಮರಾ ಕಣ್ಣುಗಳಲ್ಲಿ ಸೆರೆಯಾಗಿದೆ.ಯಜುವೇಂದ್ರ ಚಾಹಲ್ ಬೌಲಿಂಗ್ ನಲ್ಲಿ ಲಂಕಾದ ಅಸಲಂಕಾ ವಿರುದ್ಧ ಭಾರತೀಯ ಫೀಲ್ಡರ್ ಗಳು ಎಲ್ ಬಿಡಬ್ಲ್ಯು ತೀರ್ಪಿಗೆ ಅಪೀಲ್ ಇತ್ತರು. ಇದಕ್ಕೆ ಅಂಪಾಯರ್ ಔಟ್ ತೀರ್ಪಿತ್ತರು. ಆದರೆ ಲಂಕನ್ನರು ರಿವ್ಯೂಗೆ ಮನವಿ ಮಾಡಿದರು.ರಿಪ್ಲೇನಲ್ಲಿ ಬಾಲ್ ಮೊದಲು ಬ್ಯಾಟ್ ಗೆ ತಗುಲಿ ಬಳಿಕ ಪ್ಯಾಡ್ ಗೆ ತಗುಲಿರುವುದು ಸ್ಪಷ್ಟವಾಗಿತ್ತು.