ಮುಂಬೈ: ಒಂದೆಡೆ ಇಂಗ್ಲೆಂಡ್ ನಲ್ಲಿ ಕೋಚ್ ರವಿಶಾಸ್ತ್ರಿ ನೇತೃತ್ವದ ತಂಡ ಟೆಸ್ಟ್ ಸರಣಿ ಆಡುತ್ತಿರಬೇಕಾದರೆ ಇತ್ತ ರಾಹುಲ್ ದ್ರಾವಿಡ್ ಕೋಚ್ ಆಗಿರುವ ಟೀಂ ಇಂಡಿಯಾ ಎರಡನೇ ತಂಡ ಲಂಕಾದಲ್ಲಿ ಸೀಮಿತ ಓವರ್ ಗಳ ಸರಣಿ ಆಡಲಿದೆ.ಒಂದು ವೇಳೆ ಇಂಗ್ಲೆಂಡ್ ನಲ್ಲಿ ಟೀಂ ಇಂಡಿಯಾ ಸೋತು, ಲಂಕಾದಲ್ಲಿ ಗೆದ್ದರೆ ಟೀಂ ಇಂಡಿಯಾ ಕೋಚ್ ಸ್ಥಾನದ ಕುರಿತಾಗಿ ಚರ್ಚೆಗಳು ಶುರುವಾಗಲಿದೆ.ಈಗಾಗಲೇ ಅಭಿಮಾನಿಗಳಿಗೆ ರಾಹುಲ್ ದ್ರಾವಿಡ್ ಟೀಂ ಇಂಡಿಯಾ ಮುಖ್ಯ ಕೋಚ್ ಆಗಬೇಕೆಂಬ ಅಭಿಲಾಷೆಯಿದೆ.