ಕೇಪ್ ಟೌನ್: ಭಾರತ ಪ್ರವಾಸಕ್ಕೆಂದು ಬಂದು ಕೊರೋನಾ ಭಯದಿಂದಾಗಿ ಕ್ರಿಕೆಟ್ ಸರಣಿ ಅರ್ಧದಲ್ಲೇ ರದ್ದಾದ ಹಿನ್ನಲೆಯಲ್ಲಿ ತವರಿಗೆ ಮರಳಿದ್ದ ದ.ಆಫ್ರಿಕಾ ಕ್ರಿಕೆಟಿಗರ ಕೊರೋನಾ ವೈರಸ್ ಪರೀಕ್ಷೆ ಫಲಿತಾಂಶ ಹೊರಬಿದ್ದಿದೆ. ಭಾರತದಿಂದ ತವರಿಗೆ ತೆರಳಿದ ಬಳಿಕ ದ.ಆಫ್ರಿಕಾ ಕ್ರಿಕೆಟಿಗರು ನಿಗದಿತ ದಿನವರೆಗೆ ಕ್ವಾರಂಟೈನ್ ಅವಧಿಯಲ್ಲಿದ್ದರು. ಇದೀಗ ಅವರ ಪರೀಕ್ಷೆ ಫಲಿತಾಂಶ ಬಂದಿದೆ.ಎಲ್ಲಾ ಕ್ರಿಕೆಟಿಗರೂ ಕೊರೋನಾ ಪರೀಕ್ಷೆಗೊಳಗಾಗಿದ್ದು, ಎಲ್ಲರೂ ನೆಗೆಟಿವ್ ಫಲಿತಾಂಶ ಪಡೆದಿದ್ದಾರೆ. ಹೀಗಾಗಿ ಕ್ರಿಕೆಟಿಗರು ನೆಮ್ಮದಿಯ ನಿಟ್ಟುಸಿರುವ ಬಿಡುವಂತಾಗಿದೆ.