ಸಿಡ್ನಿ: ಮೂರನೇ ಟೆಸ್ಟ್ ಪಂದ್ಯದ ವೇಳೆ ಭಾರತೀಯ ಕ್ರಿಕೆಟಿಗರ ಮೇಲೆ ಆಸ್ಟ್ರೇಲಿಯಾದ ಕೆಲವು ಅಭಿಮಾನಿಗಳ ಗುಂಪು ಜನಾಂಗೀಯ ನಿಂದನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ರಿಕೆಟ್ ಆಸ್ಟ್ರೇಲಿಯಾ ಟೀಂ ಇಂಡಿಯಾ ಕ್ರಿಕೆಟಿಗರ ಕ್ಷಮೆ ಕೇಳಿದೆ. ಈ ಬಗ್ಗೆ ಐಸಿಸಿ ತನಿಖೆಗೆ ಆದೇಶಿಸಿದೆ. ಅದರ ನಡುವೆ ಘಟನೆ ಖಂಡಿಸಿರುವ ಕ್ರಿಕೆಟ್ ಆಸ್ಟ್ರೇಲಿಯಾ ಸ್ವತಂತ್ರ ತಂಡವೊಂದನ್ನು ರಚಿಸಿ ಪ್ರತ್ಯೇಕ ತನಿಖೆ ನಡೆಸಲು ಮುಂದಾಗಿದೆ. ಇಂತಹ ಘಟನೆ ನಡೆದಿರುವುದು ದುರದೃಷ್ಟಕರ. ಇದು ಎರಡು ರಾಷ್ಟ್ರಗಳ ನಡುವಿನ