ಸಿಡ್ನಿ: ಅಕ್ಟೋಬರ್ ನಲ್ಲಿ ಭಾರತದ ವಿರುದ್ಧ ಕ್ರಿಕೆಟ್ ಸರಣಿ ನಡೆಸಲು ಸಿದ್ಧವಾಗಿರುವ ಕ್ರಿಕೆಟ್ ಆಸ್ಟ್ರೇಲಿಯಾ ಅದೇ ಸಮಯಕ್ಕೆ ಟಿ20 ವಿಶ್ವಕಪ್ ಆಯೋಜಿಸುವುದು ಕಷ್ಟವೆನ್ನುತ್ತಿದೆ. ಈ ಮೂಲಕ ಭಾರತೀಯ ಕ್ರಿಕೆಟ್ ಮಂಡಳಿಗೆ ಐಪಿಎಲ್ ನಡೆಸಲು ಅನುಕೂಲ ಮಾಡಿಕೊಡುತ್ತಿದೆಯೇ ಎಂಬ ಅನುಮಾನ ಶುರುವಾಗಿದೆ.ಅಕ್ಟೋಬರ್ ನಲ್ಲಿ ಟಿ20 ವಿಶ್ವಕಪ್ ನಡೆಸುವುದು ಕೊರೋನಾ ದೃಷ್ಟಿಯಿಂದ ಅಪಾಯಕಾರಿ ಎಂದು ಐಸಿಸಿಗೆ ಕ್ರಿಕೆಟ್ ಆಸ್ಟ್ರೇಲಿಯಾ ಹೇಳಿದೆ ಎಂಬ ಸುದ್ದಿ ಹಬ್ಬಿದೆ. ಹೀಗಾದಲ್ಲಿ ಈ ಸಮಯದಲ್ಲಿ ಭಾರತದಲ್ಲಿ ಐಪಿಎಲ್ನ ನಡೆಸಲು