ಅಂದು ಕಡೆಗಣಿಸಲ್ಪಟ್ಟವರೇ ಟೀಂ ಇಂಡಿಯಾ ಗೆಲುವಿನ ರೂವಾರಿಯಾದರು!

ವಿಶಾಖಪಟ್ಟಣ| Krishnaveni K| Last Updated: ಸೋಮವಾರ, 7 ಅಕ್ಟೋಬರ್ 2019 (09:41 IST)
ವಿಶಾಖಪಟ್ಟಣ: ಭಾರತ ಮತ್ತು ದ.ಆಫ್ರಿಕಾ ನಡುವಿನ ಮೊದಲ ಟೆಸ್ಟ್ ಪಂದ್ಯ ಗೆಲ್ಲಲು ಟೀಂ ಇಂಡಿಯಾಗೆ ನೆರವಾಗಿದ್ದು ಆಯ್ಕೆ ಸಮಿತಿಯಿಂದ, ಟೀಂ ಇಂಡಿಯಾ ಮ್ಯಾನೇಜ್ ಮೆಂಟ್ ನಿಂದ ಕಡೆಗಣಿಸಲ್ಪಟ್ಟವರು ಎಂದರೆ ತಪ್ಪಾಗಲಾರದು.

 
ಮೊದಲನೆಯದಾಗಿ ಮಯಾಂಕ್ ಅಗರ್ವಾಲ್. ಹಿಂದೊಮ್ಮೆ ಆಯ್ಕೆ ಸಮಿತಿ ಅವರನ್ನು ಕಡೆಗಣಿಸುತ್ತಲೇ ಇತ್ತು. ಆದರೆ ತಾವು ಆಡಿದ ಮೊದಲ ಪಂದ್ಯದಲ್ಲೇ ಭರವಸೆ ನೀಡಿದ ಮಯಾಂಕ್ ಈ ಪಂದ್ಯದಲ್ಲಿ ದ್ವಿಶತಕ ಬಾರಿಸಿ ತಂಡಕ್ಕೆ ಬೃಹತ್ ಮೊತ್ತ ಪೇರಿಸಲು ನೆರವಾದರು.
 
ಇನ್ನು, ಪಂದ್ಯದ ಎರಡೂ ಇನಿಂಗ್ಸ್ ಗಳಲ್ಲಿ ಶತಕ ಸಿಡಿಸಿ ಪಂದ್ಯ ಶ್ರೇಷ್ಠರಾದ ರೋಹಿತ್ ಶರ್ಮಾ ಕತೆಯೂ ಹೆಚ್ಚು ಕಮ್ಮಿ ಇದುವೇ. ಸೀಮಿತ ಓವರ್ ಗಳಲ್ಲಿ ಅತ್ಯಂತ ದಾಂಡಿಗ ಎನಿಸಿಕೊಂಡಿದ್ದ ರೋಹಿತ್ ರನ್ನು ಟೆಸ್ಟ್ ತಂಡಕ್ಕೆ ಪರಿಗಣಿಸುತ್ತಲೇ ಇರಲಿಲ್ಲ. ಈ ಬೇಸರ ರೋಹಿತ್ ಗಿತ್ತು. ಅದಕ್ಕೆ ಅವರು ಈ ಪಂದ್ಯದಲ್ಲಿ ಆಟದ ಮೂಲಕ ಪ್ರತಿಕ್ರಿಯೆ ನೀಡಿದರು.
 
ರವಿಚಂದ್ರನ್ ಅಶ್ವಿನ್ ಕತೆಯೂ ಇದಕ್ಕಿಂತ ಭಿನ್ನವಲ್ಲ. ಹಿರಿಯ ಸ್ಪಿನ್ನರ್ ಆಗಿದ್ದ ಅಶ್ವಿನ್ ರನ್ನು ಸೀಮಿತ ಓವರ್ ಗಳಿಂದ ಕೈಬಿಡಲಾಯಿತು. ಬಳಿಕ ಟೆಸ್ಟ್ ತಂಡದಲ್ಲೂ ಅವರನ್ನು ಮೂಲೆಗುಂಪು ಮಾಡಲಾಗಿತ್ತು. ಆದರೆ ಈ ಪಂದ್ಯದಲ್ಲಿ ಅವಕಾಶ ಸಿಕ್ಕಾಗ  ಅದನ್ನು ಭರ್ಜರಿಯಾಗಿಯೇ ಬಳಸಿಕೊಂಡರು.
ಇದರಲ್ಲಿ ಇನ್ನಷ್ಟು ಓದಿ :