ಕೃನಾಲ್ ಪಾಂಡ್ಯ ಸಂಪರ್ಕದಲ್ಲಿದ್ದ ಕ್ರಿಕೆಟಿಗರಿಗೆ ಇಂದಿನ ಪಂದ್ಯದಲ್ಲಿ ನೋ ಎಂಟ್ರಿ

ಕೊಲೊಂಬೋ| Krishnaveni K| Last Modified ಬುಧವಾರ, 28 ಜುಲೈ 2021 (10:17 IST)
ಕೊಲೊಂಬೋ: ಕೊರೋನಾ ಸೋಂಕಿತರಾಗಿರುವ ಟೀಂ ಇಂಡಿಯಾ ಕ್ರಿಕೆಟಿಗ ಸಂಪರ್ಕದಲ್ಲಿದ್ದ ಕ್ರಿಕೆಟಿಗರ ಮೇಲೂ ಈಗ ನಿಗಾ ಇಡಲಾಗಿದೆ.
 

ಹೀಗಾಗಿ ಇಂದು ನಡೆಯಲಿರುವ ದ್ವಿತೀಯ ಟಿ20 ಪಂದ್ಯದಲ್ಲಿ ಕೃನಾಲ್ ಸಂಪರ್ಕಕ್ಕೆ ಬಂದ ಕ್ರಿಕೆಟಿಗರೂ ಆಡಲ್ಲ. ಅತ್ತ ಶ್ರೀಲಂಕಾ ತಂಡವೂ ಸಾಕಷ್ಟು ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದೆ.
 
ಎರಡೂ ತಂಡಗಳನ್ನೂ ಪ್ರತ್ಯೇಕವಾಗಿ ಕ್ವಾರಂಟೈನ್ ಗೊಳಪಡಿಸಲಾಗಿದೆ. ಅದರಲ್ಲೂ ಭಾರತ ತಂಡಕ್ಕೆ ಪ್ರತ್ಯೇಕ ಹೋಟೆಲ್ ಕೊಠಡಿಯನ್ನು ಮೀಸಲಿರಿಸಲಾಗಿದೆ. ಬಯೋ ಬಬಲ್ ವಾತಾವರಣದಲ್ಲೇ ಇದ್ದರೂ ಕೃನಾಲ್ ಗೆ ಕೊರೋನಾ ಸೋಂಕು ತಗುಲಿದ್ದು ಹೇಗೆ ಎಂಬುದು ಇನ್ನೂ ಪತ್ತೆಯಾಗಿಲ್ಲ.
ಇದರಲ್ಲಿ ಇನ್ನಷ್ಟು ಓದಿ :