ಕೋಲ್ಕೊತ್ತಾ: ಹಿಂದೊಮ್ಮೆ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಬೆಂಗಳೂರಿನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಆಸೀಸ್ ನಾಯಕ ಸ್ಟೀವ್ ಸ್ಮಿತ್ ಡಿಆರ್ ಎಸ್ ಪಡೆಯಲು ಡ್ರೆಸ್ಸಿಂಗ್ ರೂಂ ಕಡೆ ನೋಡಿದ್ದು ಭಾರೀ ವಿವಾದಕ್ಕೆ ಕಾರಣವಾಗಿದ್ದು ನೆನಪಿರಬಹುದು. ಇದೀಗ ಭಾರತ ಮತ್ತು ಶ್ರೀಲಂಕಾ ನಡುವೆ ನಡೆದ ಟೆಸ್ಟ್ ಪಂದ್ಯದಲ್ಲೂ ಅಂತಹದ್ದೇ ಘಟನೆಗಳು ನಡೆದಿದೆ. ತೃತೀಯ ದಿನ ಭುವನೇಶ್ವರ್ ಕುಮಾರ್ ಬ್ಯಾಟಿಂಗ್ ಮಾಡುತ್ತಿದ್ದಾಗ ಶ್ರೀಲಂಕಾ ನಾಯಕ ಫೇಕ್ ಫೀಲ್ಡಿಂಗ್ ಮಾಡಿ ಕೊಹ್ಲಿ ಕೆಂಗಣ್ಣಿಗೆ