ಚೆನ್ನೈ: ಐಪಿಎಲ್ 2022 ರ ಮೆಗಾ ಹರಾಜು ಪ್ರಕ್ರಿಯೆಯಲ್ಲಿ ಯಾವ ಆಟಗಾರರು ತಮ್ಮ ತಂಡದಲ್ಲೇ ಉಳಿದುಕೊಳ್ಳಲಿದ್ದಾರೆ ಎಂಬ ಬಗ್ಗೆ ಚರ್ಚೆ ಶುರುವಾಗಿದೆ.ಒಟ್ಟು ನಾಲ್ವರು ಆಟಗಾರರನ್ನು ಎಲ್ಲಾ ಫ್ರಾಂಚೈಸಿಗಳನ್ನು ತಮ್ಮಲ್ಲೇ ಉಳಿಸಿಕೊಳ್ಳಬಹುದು. ಹೀಗಾಗಿ ಯಾವೆಲ್ಲಾ ಆಟಗಾರರಿಗೆ ತಂಡದಲ್ಲಿ ಖಾಯಂ ಸ್ಥಾನ ಸಿಗಬಹುದು ಎಂಬ ಚರ್ಚೆ ಶುರುವಾಗಿದೆ.ಮೂಲಗಳ ಪ್ರಕಾರ ಸಿಎಸ್ ಕೆ ತಂಡ ಧೋನಿ ಜೊತೆಗೆ ರವೀಂದ್ರ ಜಡೇಜಾ, ಫಾ ಡು ಪ್ಲೆಸಿಸ್, ಋತುರಾಜ್ ಗಾಯಕ್ ವಾಡ್ ರನ್ನು ತಂಡದಲ್ಲೇ ಉಳಿಸಿಕೊಳ್ಳುವ ಸಾಧ್ಯತೆಯಿದೆ.